ಬಯಲ ಬದುಕು
-ಮರದ ನೆರಳಲಿ ಮನೆಯ ಮಾಡಿ ಮನದ ಮರೆಯಲಿ ಕನಸ ಹೂಡಿ ದಣಿದುಂಡ್ ಮಲಗಿದವನ ಮನೆಯೇ ನಿಜ ಸುಖದ ಗುಡ.
14 May, 2012
ಅದರರ್ಥಗಿರ್ಥಗಳು ಸೃಷ್ಠಿಕರ್ತನಿಗಿರಲಿವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆಬಾರಯ್ಯ ಮಮ ಬಂಧು ಜೀವನ ಪಥದೊಳು ಒಂದಾಗಿ ಮುಂದುವರೆಯುವಾ ಯಾವ ಜನ್ಮದ ಮೈತ್ರಿ - ಕುವೆಂಪು
ಕವಿ ಶೈಲದಲಿ ಕುಳಿತು
ಕುಂದಾದ್ರಿಯ ಸವಿದು
ಕವಿ ಮನೆಯಲಿ ಕುಣಿದು
ಕುಪ್ಪಳ್ಳಿಯಲಿ ನಲಿಯುವ ಬಾ ಗೆಳೆಯ
ಯಾವ ಜನ್ಮದ ಮೈತ್ರಿ
05 May, 2012
ಗೌರವಿಸು ಜೀವನವ
ಗೌರವಿಸು ಚೇತನವ
ಆರದೊ ಜಗವೆಂದು ಭೇದವೆಣಿಸದಿರು
ನಂಬು ನೀ ದೈವವನು
ನಂಬು ನೀ ಜಗವನ್ನು
ಇಂಬುಗೊಳುತಿರು ನೀನು ಮಾನವತ್ವದೆಡೆ
ಕೊಂಬುಗಳ ಬೆಳೆಯಿಸದೆ ಸಹಜತೆಯ ಶಿಖರದಲಿ
ನಂಬು ನಿನ್ನನು ನೀನೆ
- ಡಿ.ವಿ.ಜಿ
19 April, 2012
ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ
ಧರಿಸು ಲೋಕದ ಭರವ
ಹೊರಡು ಕರೆಬರಲಳದೆ ಮಂಕುತಿಮ್ಮ
-ಡಿ.ವಿ.ಜಿ
‹
Home
View web version