ಏಕಾಂಗಿಯಾಗಿ ಹೊರಡು, ಯಾರಾದರು ಸಿಕ್ಕಾರು |
ಏನನ್ನು ಬಯಸದೇ ಹೊರಡು, ಬೇಕಾದುದು ಸಿಕ್ಕೀತು |
ದಾರಿ ತೊರೆದು ನಡೆ, ಬಯಲು ದಕ್ಕೀತು |
ಗುರಿಯಿಲ್ಲದೆ ಹೊರಡು, ಅರಿವಿನ ಗುರುವು ಸಿಕ್ಕಾನು || ಪ ||
ನದಿಯ ಜಾಡು ಹಿಡಿ, ಕಡಲಾಗಬಹುದು |
ಧರ್ಮದ ನೆರಳ ತೊರೆ, ಮಹಾಮನೆ ಕಂಡೀತು |
ಸಾವನ್ನು ಹುಡುಕಿ ನಡೆ, ಬದುಕು ಸಿಕ್ಕೀತು |
ನಿನ್ನ ವಿರುದ್ಧ ನೀನು ಹೋರಾಡು, ಗೆದ್ದರೆ ಸಂತನಾಗುವೆ ನೀ || ೧ ||
ಸರಳ ರೇಖೆಯಾಗಿರು, ಬಾಳು ಹಗುರ ಆದೀತು |
ಸತ್ಯವ ಹುಡುಕದಿರು, ಕಂಡದ್ದು ಸುಳ್ಳಾದೀತು |
ಏಕತಾರಿಯ ಹಿಡಿ, ನಾದ ಲಯವೂ ಆದೀತು |
ಚಲನೆಗೆ ಸಾಕ್ಷಿಯಾಗು, ಶೂನ್ಯ ತಬ್ಬಿಕೊಂಡೀತು || ೨ ||
ಎದೆಯ ದನಿಯ ನುಡಿ, ಹಾಡು ಬೆಡಗು ಆದೀತು |
ಖಾಲಿಯಾಗಿ ಹೊರಡು, ಜೋಳಿಗೆ ತುಂಬೀತು |
ತೆರೆದ ತೋಳಲ್ಲಿ ನಡೆ, ಬೊಗಸೆ ಪ್ರೀತಿ ದಕ್ಕೀತು |
ಎಲ್ಲವನೂ ಕಳಚಿಟ್ಟು ಹೊರಡು, ಉಡಲು ಬೆಳಕೇ ಸಿಕ್ಕೀತು || ೩ ||
ಯಾರೂ ಒಂಟಿಯಲ್ಲ, ನೆರಳು ಹಿಂಬಾಲಿಸೆ ||
ನಡೆದಷ್ಟೂ ಹಾದಿ ಕಂಡಷ್ಟು ಬಯಲು ||
ಹೊರಡು ಈಗಲೇ ಹೊರಡು ||
ಗುಂಡಾದ ಭೂಮಿಯಲ್ಲಿ
ಎಂದಾದರು ಸಿಕ್ಕೇಸಿಗುತ್ತೇವೆ ||
ಮತ್ತೇ ಮತ್ತೇ ಸಿಕ್ಕೇ ಸಿಗುತ್ತೇವೆ || ೪ ||
- ಹಂದಲಗೆರೆ ಗಿರೀಶ್
ಏನನ್ನು ಬಯಸದೇ ಹೊರಡು, ಬೇಕಾದುದು ಸಿಕ್ಕೀತು |
ದಾರಿ ತೊರೆದು ನಡೆ, ಬಯಲು ದಕ್ಕೀತು |
ಗುರಿಯಿಲ್ಲದೆ ಹೊರಡು, ಅರಿವಿನ ಗುರುವು ಸಿಕ್ಕಾನು || ಪ ||
ನದಿಯ ಜಾಡು ಹಿಡಿ, ಕಡಲಾಗಬಹುದು |
ಧರ್ಮದ ನೆರಳ ತೊರೆ, ಮಹಾಮನೆ ಕಂಡೀತು |
ಸಾವನ್ನು ಹುಡುಕಿ ನಡೆ, ಬದುಕು ಸಿಕ್ಕೀತು |
ನಿನ್ನ ವಿರುದ್ಧ ನೀನು ಹೋರಾಡು, ಗೆದ್ದರೆ ಸಂತನಾಗುವೆ ನೀ || ೧ ||
ಸರಳ ರೇಖೆಯಾಗಿರು, ಬಾಳು ಹಗುರ ಆದೀತು |
ಸತ್ಯವ ಹುಡುಕದಿರು, ಕಂಡದ್ದು ಸುಳ್ಳಾದೀತು |
ಏಕತಾರಿಯ ಹಿಡಿ, ನಾದ ಲಯವೂ ಆದೀತು |
ಚಲನೆಗೆ ಸಾಕ್ಷಿಯಾಗು, ಶೂನ್ಯ ತಬ್ಬಿಕೊಂಡೀತು || ೨ ||
ಎದೆಯ ದನಿಯ ನುಡಿ, ಹಾಡು ಬೆಡಗು ಆದೀತು |
ಖಾಲಿಯಾಗಿ ಹೊರಡು, ಜೋಳಿಗೆ ತುಂಬೀತು |
ತೆರೆದ ತೋಳಲ್ಲಿ ನಡೆ, ಬೊಗಸೆ ಪ್ರೀತಿ ದಕ್ಕೀತು |
ಎಲ್ಲವನೂ ಕಳಚಿಟ್ಟು ಹೊರಡು, ಉಡಲು ಬೆಳಕೇ ಸಿಕ್ಕೀತು || ೩ ||
ಯಾರೂ ಒಂಟಿಯಲ್ಲ, ನೆರಳು ಹಿಂಬಾಲಿಸೆ ||
ನಡೆದಷ್ಟೂ ಹಾದಿ ಕಂಡಷ್ಟು ಬಯಲು ||
ಹೊರಡು ಈಗಲೇ ಹೊರಡು ||
ಗುಂಡಾದ ಭೂಮಿಯಲ್ಲಿ
ಎಂದಾದರು ಸಿಕ್ಕೇಸಿಗುತ್ತೇವೆ ||
ಮತ್ತೇ ಮತ್ತೇ ಸಿಕ್ಕೇ ಸಿಗುತ್ತೇವೆ || ೪ ||
- ಹಂದಲಗೆರೆ ಗಿರೀಶ್
ಈ ಹಾಡು ಹಾಡಿರುವುದು ಯಾರು ಸರ್?
ReplyDeleteನಾದ ಮಣಿನಾಲ್ಕೂರು
Deleteಹಂದಲಗೆರೆ ಗಿರೀಶ್ ಲವ್ ಯು
ReplyDeletehttps://m.facebook.com/story.php?story_fbid=847550919013232&id=325773437851782 ನಮ್ಮ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ
ReplyDeleteತುಂಬ ಸೊಗಸಾದ ಕವಿತೆ.. ಬರೆದು ನಮ್ಮನ್ನ ಚಿಂತೆಗೆ, ನೆಮ್ಮದಿಗೆ ಹಚ್ಚಿದ್ದಕ್ಕೆ ಶರಣು. ನಾದ ಮಣಿನಾಲ್ಕೂರು ಅವರು ಅದ್ಭುತವಾಗಿ ಹಾಡಿದ್ದಾರೆ.. ಟ್ಯೂನ್ ಕೂಡ. ಎಲ್ಲ ಒಂದಕ್ಕೊಂದು ಪೂರಕವಾಗಿ ಅದಮ್ಯವಾದದ್ದು ಸೃಷ್ಟಿಯಾಗಿದೆ.
ReplyDeleteತುಂಬಾ ಸುಂದರ ರಚನೆ ಅದ್ಭುತ ರಾಗ ಸಂಯೋಜನೆ
ReplyDeleteಅದ್ಭುತ ರಚನೆ ಸರ್. ನಾದಮಣಿಯವರ ರಾಗಸಂಯೋಜನೆ ಕೂಡ ಅದ್ಭುತವಾಗಿದೆ. ಓದುಗರಿಗೆ ಚಿಂತನೆಗೆ ಒಳಪಡಿಸುವಂಥದ್ದು....ಆಯ್ ಸಿ ಸಾವಂತ ಖಾನಾಪೂರ.
ReplyDelete