16 April, 2018

ಟೊಪ್ಪಿಯ ಮಾರುವ ಕೆಲಸವ ಮಾಡಿ
ಹೊಟ್ಟೆಯ ಹೊರೆವನು ದಾಸಪ್ಪ
ಟೊಪ್ಪಿಯ ಮಾರಲು ಪಕ್ಕದ
ಊರಿಗೆ ಸಾಗುತಲಿರಲು ದಾಸಪ್ಪ
ಬಿಸಿಲಿನ ಬೇಗೆಗೆ ಹಸಿವಿನ ತಾಪಕೆ
ಮಾಮರದಡಿಯಲಿ ಕುಳಿತಿರಲು
ಬುತ್ತಿಯ ಬಿಚ್ಚಿ ರೊಟ್ಟಿಯ ತೆಗೆದು
ಹಸಿವನು ನೀಗಿದ ದಾಸಪ್ಪ
ಮಾಮರದಲ್ಲಿ ಮಂಗಗಳೆಲ್ಲ
ಟಿರಿ ಟಿರಿಗುಟ್ಟುತ ಕುಳಿತಿರಲು
ಟೊಪ್ಪಿಯ ದಾಸಪ್ಪನ ಕಂಡು
ಹಲ್ಲನು ಗಿಂಜಿ ಕಿರಿಗುಡಲು
ಊಟದ ಬಳಿಕ ನಿದ್ದೆಯ ಮಾಡಿದ
ಮರದ ಬುಡದಲಿ ದಾಸಪ್ಪ
ಮರವನ್ನು ಇಳಿದು ಮಂಗಗಳೆಲ್ಲ
ಟೋಪಿಯ ಬುಟ್ಟಿಗೆ ಕೈಯಿಟ್ಟು
ಸಿಕ್ಕಿದ ಟೋಪಿಯ ತಲೆಯಲಿ ಇಟ್ಟು
ಮರದಲಿ ಕುಳಿತು ಕೀಯೆನಲು
ಎಚ್ಚರಗೊಂಡು ದಾಸಪ್ಪನು
ಬುಟ್ಟಿಯ ಒಳಗೆ ಕೈಯಿಡಲು
ಟೊಪ್ಪಿಯು ಕಾಣದೆ ಕಂಗಾಲು
ಮರದ ಮೇಲೆ ಕಪಿಗಳ ತಲೆಯಲಿ
ಟೊಪ್ಪಿಗಳೆಲ್ಲ ರಂಜಿಸಲು
ಪಕ್ಕನೆ ಉಪಾಯ ಹೊಳೆದು ದಾಸನು
ತನ್ನ ಟೊಪ್ಪಿಯ ತೆಗೆದೆಸೆಯೆ
ಕಪಿಗಳೆಲ್ಲ ಅದನೋಡುತ
ಎಸೆದವು ಟೋಪಿಯ ಸಿಕ್ಕೆಡೆಗೆ
ಎಲ್ಲ ಟೊಪ್ಪಿಯ ಕೂಡಲೇ ದಾಸನು
ಬುಟ್ಟಿಯ ಒಳಗೆ ತುಂಬಿಸುತ
ಕೂಡಲೇ ನಡೆದನು ವ್ಯಾಪಾರಕ್ಕೆನ್ನುತ
ಪಕ್ಕದ ಊರಿಗೆ ತಾ ನಗುತ !
(ಕವಿ : ಸುಬ್ರಹ್ಮಣ್ಯ ಭಟ್ )

ಆಮೆಯೊಂದು ಕೆರೆಯ ದಡದಿ

ಆಮೆಯೊಂದು ಕೆರೆಯ ದಡದಿ
ಮನೆಯ ಮಾಡಿತು

ಹಕ್ಕಿಯಂತೆ ಹಾರಬೇಕು
ಎಂದು ಬಯಸಿತು

ಗೆಳೆಯ ಹಕ್ಕಿಗಳನು
ಕಂಡು ಆಸೆ ತಿಳಿಸಿತು

ಹಕ್ಕಿಯೆರಡು ಆಮೆ
ಮಾತ ಒಪ್ಪಿಕೊಂಡವು

ಅತ್ತ ಇತ್ತ ಹಕ್ಕಿಯೆರಡು
ಬಾಡಿಗೆ ಹಿಡಿದವು

ಆಮೆ ಅದಕೆ ಜೋತು ಬೀಳೆ
ಹಾರಿಹೋದವು

ದಾರಿಯಲ್ಲಿ ಇದನು ಕಂಡ
ಜನರು ನಕ್ಕರು

ಮಾನ ಹೋಯಿತೆಂದು ಆಮೆ
ಮನದಿ ಕುದಿಯಿತು

ನಕ್ಕ ಜನರ ಬೈಯ್ಯಲೆಂದು
ಬಾಯಿ ತೆರೆಯಿತು

ಮೇಲಿನಿಂದ ಕೆಳಗೆ ಬಿದ್ದು
ಸತ್ತು ಹೋಯಿತು !

ವೈರಾಗ್ಯ

'ವೈರಾಗ್ಯ ಇದ್ದಾಗಲೇ ಜೀವನವನ್ನು ಗಾಢವಾಗಿ ಪ್ರೀತಿಸೋದಕ್ಕೆ ಆಗೋದು. ವೈರಾಗ್ಯ ಅಂದರೆ ಏನೂ ಕೆಲಸ ಮಾಡದೇ, ಸಂಪಾದನೆ ಮಾಡದೇ ಇರೋದಲ್ಲ. ಸಂಪಾದನೆ ಮಾಡಿರೋದು ನಶ್ವರ ಅಂತ ಗೊತ್ತಿರೋದು. ನನಗೆಷ್ಟು ಬೇಕು ಅಂತ ತಿಳ್ಕೊಂಡಿರೋದು. ನಾನು ಪರಮ ವಿರಾಗಿ ಅಂತ ದುಡಿಯದೇ ಇದ್ದುಬಿಡ್ತೀನಿ ಅಂದೊRಳಿ. ಆಗ ನಾನು ಭಿಕಾರಿಯಾಗಿರ್ತೀನಿ. ಭಿಕ್ಷುಕನ ವೈರಾಗ್ಯಕ್ಕೆ ಅರ್ಥವಿಲ್ಲ. ಸಂಪತ್ತಿರುವವನು ಮಾತ್ರ ವಿರಾಗಿ ಆಗಬಲ್ಲ. ಅರಮನೆಯಲ್ಲಿ ಹುಟ್ಟಿದ ಸಿದ್ಧಾರ್ಥ ಅದರ ನಶ್ವರತೆಯನ್ನು ತಿಳಕೊಂಡು ಬಿಟ್ಟು ಹೋದಾಗಲೇ ಅದನ್ನು ತ್ಯಾಗ ಅನ್ನೋದು. ತ್ಯಾಗ ಮಾಡೋದಕ್ಕೆ ಏನಾದರೂ ಇರಬೇಕಲ್ವ ನಮ್ಮ ಹತ್ರ. ನಾನು ಲಕ್ಷಾಂತರ ದುಡೀತೀನಿ ನಿಜ. ಆದರೆ ಬಳಸೋದು ಎಷ್ಟು? ನಮ್ಮನೇಲಿ ಕಡಿಮೆ ತಿನ್ನೋನು ನಾನು. ಕಡಿಮೆ ಸುತ್ತಾಡೋನು ನಾನು, ವರ್ಷಕ್ಕೆ ನಾಲ್ಕೇ ಜೊತೆ ಬಟ್ಟೆ ತಗೊಳ್ಳೋದು. ನನ್ನ ಹತ್ರ ಇರೋದು ಎಂಟು ವರ್ಷ ಹಳೆಯ ಕಾರು. ನನಗೆ ಷೋಕಿ ಇಲ್ಲ. ನಾನು ಇಷ್ಟೊಂದು ಕೆಲಸ ಮಾಡದೇ ಹೋದರೆ ಕಂಪೆನಿ ಮುಚ್ಚಿಹೋಗತ್ತೆ. ಸಂಬಳ ಜಾಸ್ತಿ ಮಾಡಕ್ಕಾಗಲ್ಲ. ನನ್ನ ಜೊತೆ ಇರೋರಿಗೆ ಅನ್ಯಾಯ ಆಗುತ್ತೆ. ನಮ್ಮ ನೌಕರರಿಗೆ ತೊಂದರೆ ಆಗುತ್ತೆ. ಅವರು ಇವತ್ತು ಕೈ ತುಂಬ ಸಂಬಳ ತಗೋತಿರೋದು ನಾನು ಜಿಪುಣತನ ಮಾಡೋದರಿಂದ, ಹಲ್ಲು ಕಚ್ಚಿ ದುಡಿಯೋದರಿಂದ. ಅವರೂ ಹಾಗೆ ಕೆಲಸ ಮಾಡಬೇಕು. ಸಂಪಾದನೆ ಮಾಡಬೇಕು. ಅದು ವ್ಯರ್ಥ ಅಂತಾನೂ ತಿಳ್ಕಂಡಿರಬೇಕು. ವೈರಾಗ್ಯ ಅಂದರೆ ಅಗಾಧವಾದ ಜೀವನ ಪ್ರೀತಿಯೇ ಹೊರತು, ಜೀವವಿರೋಧಿ ನಿಲುವು ಅಲ್ಲ'.

ಏಕಾಂಗಿಯಾಗಿ ಹೊರಡು

ಏಕಾಂಗಿಯಾಗಿ ಹೊರಡು, ಯಾರಾದರು ಸಿಕ್ಕಾರು |
ಏನನ್ನು ಬಯಸದೇ ಹೊರಡು, ಬೇಕಾದುದು ಸಿಕ್ಕೀತು |
ದಾರಿ ತೊರೆದು ನಡೆ, ಬಯಲು ದಕ್ಕೀತು |
ಗುರಿಯಿಲ್ಲದೆ ಹೊರಡು, ಅರಿವಿನ ಗುರುವು ಸಿಕ್ಕಾನು || ಪ ||

ನದಿಯ ಜಾಡು ಹಿಡಿ, ಕಡಲಾಗಬಹುದು |
ಧರ್ಮದ ನೆರಳ ತೊರೆ, ಮಹಾಮನೆ ಕಂಡೀತು |
ಸಾವನ್ನು ಹುಡುಕಿ ನಡೆ, ಬದುಕು ಸಿಕ್ಕೀತು |
ನಿನ್ನ ವಿರುದ್ಧ ನೀನು ಹೋರಾಡು, ಗೆದ್ದರೆ ಸಂತನಾಗುವೆ ನೀ || ೧ ||

ಸರಳ ರೇಖೆಯಾಗಿರು, ಬಾಳು ಹಗುರ ಆದೀತು |
ಸತ್ಯವ ಹುಡುಕದಿರು, ಕಂಡದ್ದು ಸುಳ್ಳಾದೀತು |
ಏಕತಾರಿಯ ಹಿಡಿ, ನಾದ ಲಯವೂ ಆದೀತು |
ಚಲನೆಗೆ ಸಾಕ್ಷಿಯಾಗು, ಶೂನ್ಯ ತಬ್ಬಿಕೊಂಡೀತು || ೨ ||

ಎದೆಯ ದನಿಯ ನುಡಿ, ಹಾಡು ಬೆಡಗು ಆದೀತು |
ಖಾಲಿಯಾಗಿ ಹೊರಡು, ಜೋಳಿಗೆ ತುಂಬೀತು |
ತೆರೆದ ತೋಳಲ್ಲಿ ನಡೆ, ಬೊಗಸೆ ಪ್ರೀತಿ ದಕ್ಕೀತು |
ಎಲ್ಲವನೂ ಕಳಚಿಟ್ಟು ಹೊರಡು, ಉಡಲು ಬೆಳಕೇ ಸಿಕ್ಕೀತು || ೩ ||

ಯಾರೂ ಒಂಟಿಯಲ್ಲ, ನೆರಳು ಹಿಂಬಾಲಿಸೆ ||
ನಡೆದಷ್ಟೂ ಹಾದಿ ಕಂಡಷ್ಟು ಬಯಲು  ||
ಹೊರಡು ಈಗಲೇ ಹೊರಡು ||
ಗುಂಡಾದ ಭೂಮಿಯಲ್ಲಿ
ಎಂದಾದರು ಸಿಕ್ಕೇಸಿಗುತ್ತೇವೆ ||
ಮತ್ತೇ ಮತ್ತೇ ಸಿಕ್ಕೇ ಸಿಗುತ್ತೇವೆ || ೪ ||

- ಹಂದಲಗೆರೆ ಗಿರೀಶ್

14 May, 2012


ಅದರರ್ಥಗಿರ್ಥಗಳು ಸೃಷ್ಠಿಕರ್ತನಿಗಿರಲಿವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆಬಾರಯ್ಯ ಮಮ ಬಂಧು ಜೀವನ ಪಥದೊಳು ಒಂದಾಗಿ ಮುಂದುವರೆಯುವಾ ಯಾವ ಜನ್ಮದ ಮೈತ್ರಿ - ಕುವೆಂಪು




ಕವಿ ಶೈಲದಲಿ ಕುಳಿತು
ಕುಂದಾದ್ರಿಯ ಸವಿದು
ಕವಿ ಮನೆಯಲಿ ಕುಣಿದು
ಕುಪ್ಪಳ್ಳಿಯಲಿ ನಲಿಯುವ ಬಾ ಗೆಳೆಯ
ಯಾವ ಜನ್ಮದ ಮೈತ್ರಿ

05 May, 2012

ಗೌರವಿಸು ಜೀವನವ
ಗೌರವಿಸು ಚೇತನವ
ಆರದೊ ಜಗವೆಂದು ಭೇದವೆಣಿಸದಿರು

ನಂಬು ನೀ ದೈವವನು
ನಂಬು ನೀ ಜಗವನ್ನು
ಇಂಬುಗೊಳುತಿರು ನೀನು ಮಾನವತ್ವದೆಡೆ
ಕೊಂಬುಗಳ ಬೆಳೆಯಿಸದೆ ಸಹಜತೆಯ ಶಿಖರದಲಿ
ನಂಬು ನಿನ್ನನು ನೀನೆ
                    - ಡಿ.ವಿ.ಜಿ