'ವೈರಾಗ್ಯ ಇದ್ದಾಗಲೇ ಜೀವನವನ್ನು ಗಾಢವಾಗಿ ಪ್ರೀತಿಸೋದಕ್ಕೆ ಆಗೋದು. ವೈರಾಗ್ಯ ಅಂದರೆ ಏನೂ ಕೆಲಸ ಮಾಡದೇ, ಸಂಪಾದನೆ ಮಾಡದೇ ಇರೋದಲ್ಲ. ಸಂಪಾದನೆ ಮಾಡಿರೋದು ನಶ್ವರ ಅಂತ ಗೊತ್ತಿರೋದು. ನನಗೆಷ್ಟು ಬೇಕು ಅಂತ ತಿಳ್ಕೊಂಡಿರೋದು. ನಾನು ಪರಮ ವಿರಾಗಿ ಅಂತ ದುಡಿಯದೇ ಇದ್ದುಬಿಡ್ತೀನಿ ಅಂದೊRಳಿ. ಆಗ ನಾನು ಭಿಕಾರಿಯಾಗಿರ್ತೀನಿ. ಭಿಕ್ಷುಕನ ವೈರಾಗ್ಯಕ್ಕೆ ಅರ್ಥವಿಲ್ಲ. ಸಂಪತ್ತಿರುವವನು ಮಾತ್ರ ವಿರಾಗಿ ಆಗಬಲ್ಲ. ಅರಮನೆಯಲ್ಲಿ ಹುಟ್ಟಿದ ಸಿದ್ಧಾರ್ಥ ಅದರ ನಶ್ವರತೆಯನ್ನು ತಿಳಕೊಂಡು ಬಿಟ್ಟು ಹೋದಾಗಲೇ ಅದನ್ನು ತ್ಯಾಗ ಅನ್ನೋದು. ತ್ಯಾಗ ಮಾಡೋದಕ್ಕೆ ಏನಾದರೂ ಇರಬೇಕಲ್ವ ನಮ್ಮ ಹತ್ರ. ನಾನು ಲಕ್ಷಾಂತರ ದುಡೀತೀನಿ ನಿಜ. ಆದರೆ ಬಳಸೋದು ಎಷ್ಟು? ನಮ್ಮನೇಲಿ ಕಡಿಮೆ ತಿನ್ನೋನು ನಾನು. ಕಡಿಮೆ ಸುತ್ತಾಡೋನು ನಾನು, ವರ್ಷಕ್ಕೆ ನಾಲ್ಕೇ ಜೊತೆ ಬಟ್ಟೆ ತಗೊಳ್ಳೋದು. ನನ್ನ ಹತ್ರ ಇರೋದು ಎಂಟು ವರ್ಷ ಹಳೆಯ ಕಾರು. ನನಗೆ ಷೋಕಿ ಇಲ್ಲ. ನಾನು ಇಷ್ಟೊಂದು ಕೆಲಸ ಮಾಡದೇ ಹೋದರೆ ಕಂಪೆನಿ ಮುಚ್ಚಿಹೋಗತ್ತೆ. ಸಂಬಳ ಜಾಸ್ತಿ ಮಾಡಕ್ಕಾಗಲ್ಲ. ನನ್ನ ಜೊತೆ ಇರೋರಿಗೆ ಅನ್ಯಾಯ ಆಗುತ್ತೆ. ನಮ್ಮ ನೌಕರರಿಗೆ ತೊಂದರೆ ಆಗುತ್ತೆ. ಅವರು ಇವತ್ತು ಕೈ ತುಂಬ ಸಂಬಳ ತಗೋತಿರೋದು ನಾನು ಜಿಪುಣತನ ಮಾಡೋದರಿಂದ, ಹಲ್ಲು ಕಚ್ಚಿ ದುಡಿಯೋದರಿಂದ. ಅವರೂ ಹಾಗೆ ಕೆಲಸ ಮಾಡಬೇಕು. ಸಂಪಾದನೆ ಮಾಡಬೇಕು. ಅದು ವ್ಯರ್ಥ ಅಂತಾನೂ ತಿಳ್ಕಂಡಿರಬೇಕು. ವೈರಾಗ್ಯ ಅಂದರೆ ಅಗಾಧವಾದ ಜೀವನ ಪ್ರೀತಿಯೇ ಹೊರತು, ಜೀವವಿರೋಧಿ ನಿಲುವು ಅಲ್ಲ'.
No comments:
Post a Comment